ಸುದ್ದಿ - ಸುತ್ತೋಲೆ

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಹಾಗೂ ವಿಕಲಚೇತನ ಮಕ್ಕಳಿಗೆ ಸಹಾಯಧನ ನೀಡುವ ಬಗ್ಗೆ.

ಕರ್ನಾಟಕ ಕಾರ್ಮಿಕ ಉದ್ಯೋಗ ಮತ್ತು ತರಬೇತಿ ಇಲಾಖೆಗಳ ನೌಕರರ ಸಹಕಾರ ಸಂಘ ನಿಯಮಿತ

ಕಾರ್ಮಿಕ ಭವನ (ನೆಲಮಹಡಿ),    ಬನ್ನೇರುಘಟ್ಟ ರಸ್ತೆ,     ಬೆಂಗಳೂರು - 560 029     ದೂ : 080-29753083


ಸಂಖ್ಯೆ: ಕೆ.ಎಲ್.ಇ.ಟಿ.ಇ./ಸುತ್ತೋಲೆ/05/2024-25                ದಿನಾಂಕ: 11-06-2024


ಸುತ್ತೋಲೆ

ವಿಷಯ:- ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಹಾಗೂ ವಿಕಲಚೇತನ ಮಕ್ಕಳಿಗೆ ಸಹಾಯಧನ ನೀಡುವ ಬಗ್ಗೆ.

-/-/-/-

ದಿನಾಂಕ: 10-06-2024 ರಂದು ನಡೆದ ಕಾರ್ಯಕಾರಿ ಮಂಡಳಿಯ ವಿಶೇಷ ಸಭೆಯಲ್ಲಿ, ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ ಈ ವರ್ಷ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಒಟ್ಟಾರೆ 70% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ 40 (Top-40) ವಿದ್ಯಾರ್ಥಿಗಳಿಗೆ ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಒಟ್ಟಾರೆ 70% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ 40 (Top-40) ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿ ಸನ್ಮಾನಿಸಲು ಮತ್ತು ಸಂಘದ ಸದಸ್ಯರ ಮಕ್ಕಳು ವಿಕಲಚೇತನರಾಗಿದ್ದಲ್ಲಿ ಒಟ್ಟಾರೆ ಸೇವೆಯ ಒಂದು ಭಾರಿಗೆ ಮಾತ್ರ 3 ಸದಸ್ಯರ ಮಕ್ಕಳಿಗೆ ಸಹಾಯಧನವನ್ನು ಮುಂಬರುವ 65ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.

ಆದ್ದರಿಂದ ಈ ಪತ್ರದೊಂದಿಗೆ ಲಗತ್ತಿಸಿರುವ ಅರ್ಜಿ ನಮೂನೆಯನ್ನು ನಕಲು ಮಾಡಿಸಿಕೊಂಡು ಪೂರ್ಣ ವಿವರಗಳೊಂದಿಗೆ ಭರ್ತಿಮಾಡಿ “ದೃಢೀಕರಿಸಿದ” ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ಅಂಕಪಟ್ಟಿಯ ಪ್ರತಿಯೊಂದಿಗೆ ದಿನಾಂಕ: 31-08-2024ರ ಸಂಜೆ 5-00 ಗಂಟೆಯೊಳಗೆ ಅಥವಾ ಮುಂಚಿತವಾಗಿ ಸಂಘಕ್ಕೆ ಕಳುಹಿಸಿ ಕೊಡಬೇಕೆಂದು ಕೋರಲಾಗಿದೆೆ ಮತ್ತು ನಿಗಧಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಕಡ್ಡಾಯವಾಗಿ ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಯಪಡಿಸಿದೆ.

ವಿಶೇಷ ಸೂಚನೆ:-

೧. ದೃಢೀಕರಿಸಿದ ಅಂಕಪಟ್ಟಿ ಅಥವಾ ಅಂಗವಿಕಲತೆಯ ಪ್ರಮಾಣ ಪತ್ರದ ಪ್ರತಿಯನ್ನು ದಿನಾಂಕ: 31-08-2024ರ ಸಂಜೆ 5-00 ಗಂಟೆಯೊಳಗೆ ಖುದ್ದಾಗಿ / ಅಂಚೆ ಮೂಲಕ / ಕೋರಿಯರ್ ಮೂಲಕ ಸಂಘದ ಕಛೇರಿಗೆ ತÀಲುಪುವಂತೆ ಕಳುಹಿಸಿ ಕೊಡತಕ್ಕದ್ದು, ಸಮಯ ಮೀರಿದ ನಂತರ ಬಂದ ಅರ್ಜಿಗಳನ್ನು ಕಡ್ಡಾಯವಾಗಿ ತಿರಸ್ಕರಿಸಲಾಗುವುದು.

೨. ಮಾನ್ಯ ಸದಸ್ಯರು ತಮ್ಮ ಸದಸ್ಯತ್ವದ ಎಲ್ಲಾ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿರುತ್ತದೆ. ಸದಸ್ಯರು ಸದಸ್ಯತ್ವದ ಸಂಖ್ಯೆಯನ್ನು (ಖ-ಓಔ:) ಬಳಸಿಕೊಂಡು ಹಾಗೂ ಅದೇ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಉಪಯೋಗಿಸಿ ತಮ್ಮ ಖಾತೆಗೆ ಸಂಬಂಧಿಸಿದ ವಿವರಗಳನ್ನು ಪಡೆಯಬಹುದು.

ವಂದನೆಗಳೊಂದಿಗೆ,

ಸಹಿ/- (ಲಿಂಗರಾಜೇಗೌಡ. ಎ.ಎಂ)
ಅಧ್ಯಕ್ಷರು
ಕಾರ್ಯಕಾರಿ ಮಂಡಳಿಯ ಪರವಾಗಿ,


ನಿವೇದನೆ:

ಕಛೇರಿಯ ಮುಖ್ಯಸ್ಥರು/ಸಂಸ್ಥೆಯ ಪ್ರಾಚಾರ್ಯರು/ಬಟವಾಡೆ ಅಧಿಕಾರಿಗಳು ದಯಮಾಡಿ ಈ ಎಲ್ಲಾ ವಿಷಯವನ್ನು ತಮ್ಮ ಕಛೇರಿ/ಸಂಸ್ಥೆಯಲ್ಲಿರುವ ಸದಸ್ಯರುಗಳ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳಲಾಗಿದೆ.

Download Education Scholarship Application - ವಿದ್ಯಾಭ್ಯಾಸ ಪ್ರೋತ್ಸಾಹ ಧನ ಅರ್ಜಿಯ ಪ್ರತಿ

Download Differently Abled Scholarship Application - ವಿಕಲಚೇತನ ಮಕ್ಕಳ ಪ್ರೋತ್ಸಾಹ ಧನ ಅರ್ಜಿಯ ಪ್ರತಿ

ನೇಮಕಾತಿ ಪ್ರಕಟಣೆ: ಸಂಘದಲ್ಲಿ ಖಾಲಿ ಇರುವ “ಗುಮಾಸ್ತರು” ಹುದ್ದೆಗೆ ಅರ್ಜಿಗಳನ್ನು ದಿನಾಂಕ:21/08/2024ರ ಸಂಜೆ:05-30 ರೊಳಗೆ ಆಹ್ವಾನಿಸಲಾಗಿದೆ

ಕರ್ನಾಟಕ ಕಾರ್ಮಿಕ ಉದ್ಯೋಗ ಮತ್ತು ತರಬೇತಿ ಇಲಾಖೆಗಳ ನೌಕರರ ಸಹಕಾರ ಸಂಘ ನಿಯಮಿತ

ಕಾರ್ಮಿಕ ಭವನ (ನೆಲಮಹಡಿ),    ಬನ್ನೇರುಘಟ್ಟ ರಸ್ತೆ,     ಬೆಂಗಳೂರು - 560 029     ದೂ : 080-29753083


ಸಂಖ್ಯೆ:ಕೆಎಲ್‌ಇಟಿಇ/ನೇ.ಪ್ರಕಟಣೆ/13/2024-25                 ದಿನಾಂಕ:20/07/2024


ನೇಮಕಾತಿ ಪ್ರಕಟಣೆ

ಕರ್ನಾಟಕ ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆಗಳ ನೌಕರರ ಸಹಕಾರ ಸಂಘವು 1959 ರಲ್ಲಿ ಪ್ರಾರಂಭವಾಗಿ, ಸಹಕಾರ ಕ್ಷೇತ್ರದಲ್ಲಿ ಸತತ “ಎ” ಶ್ರೇಣಿಯ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸುಮಾರು 64 ವರ್ಷಗಳಿಂದ ಆರ್ಥಿಕ ಸದೃಡತೆಯೊಂದಿಗೆ ಪ್ರಗತಿಪಥದಲ್ಲಿ ಮುನ್ನುಗ್ಗುತ್ತಿರುವ ನಮ್ಮ ಸಂಘದಲ್ಲಿ ಖಾಲಿ ಇರುವ “ಗುಮಾಸ್ತರು” ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಂಘದ ಕಛೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ದಿನಾಂಕ : 21/08/2024ರ ಸಂಜೆ 05-30 ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.

ಹುದ್ದೆಯ ವಿವರ
1 2 3 4 5 6 7
ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳ ಸಂಖ್ಯೆ ವೇತನ ಶ್ರೇಣಿ (ರೂ.) ವಿದ್ಯಾರ್ಹತೆ ವಯೋಮಿತಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ
“ಗುಮಾಸ್ತರು” 01 (ಒoದು) 17650-450-
19000-500-
21000-600-
24600-700-
28800-800-
32000.+ ಇತರೆ ಭತ್ಯೆಗಳು
ಅಂಗೀಕೃತ ವಿಶ್ವವಿದ್ಯಾನಿಲಯ- ದಿಂದ ಪಡೆದ ಬಿ.ಕಾಂ ಪದವಿ (ಪ್ರಥಮ ದರ್ಜೆ) ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 21 ವರ್ಷಗಳು ಗರಿಷ್ಠ 32 ವರ್ಷಗಳು. 22/07/2024 21/08/2024 ಸಂಜೆ 05-30 ರೊಳಗೆ

8) ಅರ್ಜಿ ಶುಲ್ಕ :-
ಅಭ್ಯರ್ಥಿಯು ಅರ್ಜಿ ಜೊತೆಗೆ ರೂ.500/- ಡಿ.ಡಿ ಯನ್ನು “ಅಧ್ಯಕ್ಷರು ಕರ್ನಾಟಕ ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆಗಳ ನೌಕರರ ಸಹಕಾರ ಸಂಘ ನಿಯಮಿತ ಬೆಂಗಳೂರು-29.” ಇವರ ಹೆಸರಿಗೆ ಪಾವತಿಯಾಗುವಂತೆ ಪಡೆದು ಲಗತ್ತಿಸುವುದು ಅಥವಾ ಖುದ್ದು ಸಂಘದ ಕಛೇರಿಗೆ ಹಾಜರಾಗಿ ನಗದು ಪಾವತಿಸಿ ರಸೀದಿ ಲಗತ್ತಿಸುವುದು.

9) ಆಯ್ಕೆ ವಿಧಾನ :-ಅರ್ಜಿ ಸಲ್ಲಿಸಿರುವ ಅಂತಿಮ ಅರ್ಹ ಅಭ್ಯರ್ಥಿಗಳಿಗೆ ಈ ಕೆಳಕಂಡ ಮೂರು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಲಾಗುವುದು.

a)ಲಿಖಿತ ಪರೀಕ್ಷೆ. (ವಿಷಯ : ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಸಹಕಾರ ಸಂಘಗಳ ಕಾಯ್ದೆ / ನಿಯಮಗಳ ಬಗ್ಗೆ, ಮತ್ತು ಇತ್ಯಾದಿ.)

b) ಪ್ರಾಯೋಗಿಕ ಪರೀಕ್ಷೆ. (ಕನ್ನಡ-ಇಂಗ್ಲೀಷ್ ಬೆರಳಚ್ಚು ಸಾಮರ್ಥ್ಯ, ವಾಣಿಜ್ಯ ವ್ಯವಹಾರಕ್ಕೆ ಸಂಬoಧಿಸಿದ ಲೆಕ್ಕ ಮತ್ತು ಕಂಪ್ಯೂಟರ್ ಜ್ಞಾನ.)

c) ಮುಖಾಮುಖಿ ಸಂದರ್ಶನ.

10) ಖಾಯಂ ಪೂರ್ವ ಅವಧಿ :-
ಆಯ್ಕೆಯಾದ ಅಭ್ಯರ್ಥಿಗಳು 1 (ಒಂದು) ವರ್ಷ ನಿಯಮಾವಳಿಗಳಂತೆ ಖಾಯಂ ಪೂರ್ವ (ಪ್ರೊಬೇಷನರಿ) ಅವಧಿಯಲ್ಲಿರಬೇಕು. ತದನಂತರ ಕನಿಷ್ಠ 3 (ಮೂರು) ವರ್ಷಗಳ ಕಾಲ ಸಂಘದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಲು ಬದ್ಧರಾಗಿರಬೇಕು.

11) ನಿವೃತ್ತಿ ವಂತಿಕೆ & ಸೇವಾ ಭದ್ರತಾ ಠೇವಣಿ :-
ಸಂಘಕ್ಕೆ ಸೇವಾ ಭದ್ರತಾ ಠೇವಣಿಯಾಗಿ ರೂ. 10000/- (ಹತ್ತು ಸಾವಿರ) ಗಳನ್ನು ಠೇವಣಿ ಇಡಬೇಕು ಮತ್ತು ನಿವೃತ್ತಿ ವಂತಿಕೆಯಾಗಿ ಸಂಬಳದಲ್ಲಿ ತಮ್ಮ ವತಿಯಿಂದ ರೂ.2000/- ಹಾಗೂ ಸಂಘದ ವತಿಯಿಂದ ರೂ.2000/- ಗಳನ್ನು ಹಾಲಿ ಇರುವ ನಿಯಮಗಳಂತೆ ಜಮಾ ಮಾಡಬೇಕು.

12) ಅರ್ಜಿ ಸಲ್ಲಿಸುವ ವಿಳಾಸ :-
ಸಂಪೂರ್ಣ ಭರ್ತಿ ಮಾಡಿದ ಅರ್ಜಿಗಳನ್ನು “ಅಧ್ಯಕ್ಷರು, ಕರ್ನಾಟಕ ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆಗಳ ನೌಕರರ ಸಹಕಾರ ಸಂಘ (ನಿ), ನೆಲ ಮಹಡಿ, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29”. ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದು ಹಾಜರಾಗಿ ನಿಗದಿತ ದಿನಾಂಕ ಮತ್ತು ಸಮಯದೊಳಗೆ ತಲುಪಿಸುವುದು.

-: ಇತರೆ ಷರತ್ತುಗಳು :-

1) ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಲಿಖಿತ ಪರೀಕ್ಷೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ಅಭ್ಯರ್ಥಿಯ ಇ-ಮೇಲ್ / ವಾಟ್ಸ್ಆಫ್‌ಗೆ ಕಳುಹಿಸಲಾಗುವುದು ಹಾಗೂ ಸಂಘದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

2) ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಎಲ್ಲಾ ಅಂಕಪಟ್ಟಿಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ಪತ್ರಾಂಕಿತ ಅಧಿಕಾಗಳಿಂದ “ದೃಢೀಕರಿಸಿ” ಸಲ್ಲಿಸುವುದು.

3) ಕೊನೇ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ, ಹಾಗೂ ಅರ್ಜಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

4) ಅಪೂರ್ಣವಾದ ಹಾಗೂ ದಾಖಲಾತಿಗಳಲ್ಲಿ ವ್ಯತ್ಯಾಸ ಕಂಡುಬAದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

5) ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು.

6) ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಭಾಷೆಯಲ್ಲಿರುತ್ತವೆ.

7) ಆಯ್ಕೆಯಾದ ಅಭ್ಯರ್ಥಿಯು ಸಂಘದ ಬೈಲಾಗಳಿಗೆ ಹಾಗೂ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಂiÀiಮಾವಳಿಗಳಿಗೆ ಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು.

8) ಆಯ್ಕೆಯಾದ ಅಭ್ಯರ್ಥಿಯು ಸಂಘಕ್ಕೆ “ಮುಚ್ಚಳಿಕೆ ಪತ್ರ” ವನ್ನು ಬರೆದು, ನೋಟರಿ ಮಾಡಿಸಿ ಸಲ್ಲಿಸಬೇಕು.

9) ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಯು ಕಡ್ಡಾಯ ಸೇವಾ ಅವಧಿಯಲ್ಲಿ ಕಾರಣಾಂತರದಿAದ ಹುದ್ದೆಗೆ ರಾಜಿನಾಮೆ ನೀಡಿದರೆ ಹಿಂದಿನ ತಿಂಗಳು ತಾವು ಪಡೆದ ಒಂದು ತಿಂಗಳ ಸಂಬಳವನ್ನು ಸಂಘಕ್ಕೆ ಪಾವತಿಸಬೇಕಾಗುತ್ತದೆ.

10) ಕಾರ್ಯಕಾರಿ ಮಂಡಳಿಯ ತೀರ್ಮಾನವೇ ಅಂತಿಮ ತೀರ್ಮಾನ. ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದÀವಿಲ್ಲ.

ವಂದನೆಗಳೊಂದಿಗೆ,

ಸಹಿ/- (ಲಿಂಗರಾಜೇಗೌಡ. ಎ.ಎಂ)
ಅಧ್ಯಕ್ಷರು
ಕಾರ್ಯಕಾರಿ ಮಂಡಳಿಯ ಪರವಾಗಿ,


Download Application Form - ಅರ್ಜಿಯ ಪ್ರತಿ