ಸುದ್ದಿ - ಸುತ್ತೋಲೆ

ನಡೆದು ಬಂದ ಹಾದಿ

ಕರ್ನಾಟಕ ಕಾರ್ಮಿಕ ಉದ್ಯೋಗ ಮತ್ತು ತರಬೇತಿ ಇಲಾಖೆ ನೌಕರರ ಸಹಕಾರ ಸಂಘವು ನೋಂದಣಿ ಸಂಖ್ಯೆ:1054 ಯೊಂದಿಗೆ ಎ.ಆರ್.ಬಿ. ದಿನಾಂಕ 9-6-1959 ರಂದು ಪ್ರಾರಂಭವಾಯಿತು. ನೋಂದಣಿ ವೇಳೆ ಸಂಘದ ಹೆಸರು ಮೈಸೂರು ಲೇಬರ್ ಡಿಪಾರ್ಟಮೆಂಟ್ ಎಂಪ್ಲಾಯೀಸ್ ಸಹಕಾರ ಸಂಘ ನಿಯಮಿತ, ಬೆಂಗಳೂರು ಎಂದು ನೊಂದಾಯಿಸಲಾಗಿತ್ತು. ಅಂದಿನ ಕಾರ್ಮಿಕ ಅಯುಕ್ತತರಾದ ಶ್ರೀ.ಕೆ.ಆರ್.ಮರಿದೇವಗೌಡರು ತಮ್ಮ ಅಮೃತ ಹಸ್ತದಿಂದ ಉದ್ಘಾಟನೆಯನ್ನು ನೆರವೇರಿಸಿದ್ದರು. ಆರಂಭದ ದಿನಗಳಲ್ಲಿ ಸಂಘದಲ್ಲಿ ಸಾಲ ನೀಡಬೇಕಾದಾಗ ಸಂಘವು ಕೆಲವು ವರ್ಷಗಳ ಕಾಲ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಾಲವನ್ನು ಪಡೆದು ಸದಸ್ಯರಿಗೆ ನೀಡಿರುತದೆ. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಲ್ಲಿ ನಿವೃತ್ತರಾದ ದಿವಂಗತ ಶ್ರೀ.ಹ.ತ. ಬಸೇಗೌಡರವರು ಸಹ ವೇತನ ಕಾರ್ಯದರ್ಶಿಗಳಾಗಿ ಸ್ಥಾನ ನಿರ್ವಹಿಸಿದರು.

 

ದಿನಾಂಕ 31-12-1991 ರಲ್ಲಿ ಅನುಮೋದನೆಗೊಂಡ ತಿದ್ದುಪಡಿ ಉಪನಿಯಮದಂತೆ ಸಂಘದ ಹೆಸರನ್ನು ಕರ್ನಾಟಕ ಕಾರ್ಮಿಕ ಉದ್ಯೋಗ ಮತ್ತು ತರಬೇತಿ ಇಲಾಖೆ ನೌಕರರ ಸಹಕಾರ ಸಂಘ, ನಿಯಮಿತ ಬೆಂಗಳೂರು ಎಂದು ಬದಲಾವಣೆಗೊಂಡಿತು. ಸಂಘವು ದಿನಾಂಕ 4-11-1995ರಲ್ಲಿ ಅನುಮೋದನೆಗೊಂಡ ತಿದ್ದುಪಡಿ ಉಪನಿಯಮದಂತೆ ಸಾಮಾನ್ಯ ಸಾಲದ ಮೊತ್ತವನ್ನು ಹೆಚ್ಚಿಸಿ ರೂ.25,000/- ಗಳ ಎರಡು ಸಮ ಕಂತುಗಳಲ್ಲಿ ಸಾಲ ನೀಡುತ್ತಾ ಬಂದಿರುತ್ತದೆ. ಸಂಘದ ಕಾರ್ಯವ್ಯಾಪ್ತಿಯು ದಿನಾಂಕ 14-12-1997 ರ ತಿದ್ದುಪಡಿಯಂತೆ ಹಾಗೂ ಇಲಾಖೆಯಿಂದ ಅನುಮೊದನೆಗೊಂಡ ಉಪ ನಿಯಮ ಸಂ(2)ರ ರೀತ್ಯ ಕರ್ನಾಟಕ ರಾಜ್ಯದಲ್ಲಿರುವ ಕಾರ್ಮಿಕ , ಉದ್ಯೋಗ ಮತ್ತು ತರಬೇತಿ ಇಲಾಖೆಗಳ ನೌಕರರಿಗೆ ಸೀಮಿತವಾಗಿದ್ದು , ಇಂದು ರಾಜ್ಯ ವ್ಯಾಪ್ತಿಯನ್ನು ಪಡೆದಿರುತ್ತದೆ. ದಿನಾಂಕ 31-5-1999ರಲ್ಲಿ ತಿದ್ದುಪಡಿಗೊಂಡ ನಂತರ ಮನೆ ಕಟ್ಟುವ ಸಾಲ/ಮನೆ ರಿಪೇರಿ ಸಾಲವನ್ನು ರೂ.40,000/- ರ ಎರಡು ಸಮ ಕಂತುಗಳಲ್ಲಿ ಸಾಲ ನೀಡುತ್ತಾ ಬಂದಿರುತ್ತದೆ.

 

ಆಗಿಂದಾಗ್ಗೆ ಪರಸ್ಪರ ಸಹಾಯ ಧನವನ್ನು ಹಾಗೂ ಷೇರುಧನವನ್ನು ಹೆಚ್ಚಿಸಿಕೊಂಡು ಮತ್ತು ಮಿತವ್ಯೆಯದಿಂದ ದುಡಿಯುವ ಬಂಡವಾಳವನ್ನು ಹೆಚ್ಚಿಸಿಕೊಂಡು ಸದಸ್ಯರಿಗೆ ಸಾಲ ನೀಡುತ್ತಾ ಬಂದಿರುತ್ತದೆ.

ದಿನಾಂಕ : 4-11-95 ರಲ್ಲಿ ತಿದ್ದುಪಡಿಗೊಂಡು  ಸದಸ್ಯರಿಗೆ ನಿವೃತ್ತಿಯಾದಾಗ/ಸ್ವಯಂ ನಿವೃತ್ತಿಯಾದಾಗ/ಕಾಲವಾದವರಿಗೆ ಕಾಲ್ಮನಿ(ಪ್ರೊತ್ಸಾಹ ಧನ) 1 ವರ್ಷದಿಂದ 5 ವರ್ಷದವರಿಗೆ ರೂ.1000/-  5 ವರ್ಷದಿಂದ 10 ವರ್ಷದವರಿಗೆ ರೂ.2000/- ಹಾಗೂ 10 ವರ್ಷದಿಂದ ಮೇಲ್ಪಟ್ಟ ಸಮಯಕ್ಕೆ ರೂ.3000/- ಪ್ರೊತ್ಸಾಹ ಧನ ನೀಡುತ್ತಾ ಬಂದಿರುತ್ತದೆ.

ದಿನಾಂಕ: 9-4-2001 ರಿಂದ ಅನುಮೋದನೆಗೊಂಡ ತಿದ್ದುಪಡಿ ಉಪನಿಯಮದಂತೆ ಸ್ವಇಚ್ಛೆಯಿಂದ ಸದಸ್ಯತ್ವ ವಾಪಸ್ ಪಡೆದ ಸದಸ್ಯರು ಮರು ಸದಸ್ಯತ್ವ ಪಡೆಯಲು ಅರ್ಹರಾಗಿರುವುದಿಲ್ಲ.